Monday, October 14, 2013

STAMP DUTY EVASION BY HOUSING CO-OP SOCIETIES UNDER SCRUTINY - BOUGHT SITES FROM HOUSING SOCIETIES - THEN ENJOY THE INVESTIGATION - FINES 10 TIMES THE TAX EVADED!!!



STAMP DUTY EVASION BY THE HOUSING CO-OPERATIVE SOCIETIES IN KARNATAKA(SPECIALLY AT BANGALORE) IS UNDER SCRUTINY BY THE DEPARTMENT OF STAMPS AND REGISTRATION AND THE INCOME TAX DEPARTMENT

ಮುದ್ರಾಂಕ ಶುಲ್ಕ ವಂಚನೆ ನಿರ್ಮಾಣ ಸಂಘಗಳ ತನಿಖೆ(HOUSING CO – OPERATIVE SOCIETIES)

THE FINE FOR THE DUTY EVASION IS 10 TIMES THE STAMP DUTY CONCEALED OR HIDDEN OR MIS REPRESENTED OR TAX EVADED.
COURTSEY: A NEWS PAPER REPORT.
 url link:

ರಾಜ್ಯದಲ್ಲಿನ ಎಲ್ಲ ಗೃಹ ನಿರ್ಮಾಣ ಸಹಕಾರ ಸಂಘಗಳು ನೀಡಿರುವ ನಿವೇಶನ ಬಗ್ಗೆ ತನಿಖೆ ಮಾರುಕಟ್ಟೆ ದರ ಮರೆಮಾಚಿ ಮಾರ್ಗಸೂಚಿ ದರದಲ್ಲಿ ಮುದ್ರಾಂಕ ಶುಲ್ಕ ಪಾವತಿ ನಿವೇಶನ ಖರೀದಿಸಿದವರಿಂದ ಹೆಚ್ಚಿನ ಹಣ ಪಡೆದಿರುವ ಭೂಮಾಲೀಕರು, ಅಭಿವೃದ್ಧಿದಾರರು ರಾಜಸ್ವ ಸೋರಿಕೆಗೆ ಕಾರಣರಾದವರಿಂದಲೇ ನಷ್ಟ ವಸೂಲಿ ಜತೆಗೆ ಶಿಸ್ತು ಕ್ರಮ ಕೈಗೊಳ್ಳಲೂ ಆದೇಶ


ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ಪಡೆದಿದ್ದೀರಾ? ಅಥವಾ ಮನೆ ಖರೀದಿಸಿದ್ದೀರಾ? ನೋಂದಣಿಯೂ ಆಗಿದೆಯೇ? ಅದು ಹಿಂದೆ ಕೃಷಿ ಭೂಮಿ ಆಗಿತ್ತೇ? ಹಾಗಾದರೆ, ತನಿಖೆ ಎದುರಿಸಲು ಸಿದ್ಧರಾಗಿ. ಏಕೆಂದರೆ ಮುದ್ರಾಂಕ ಶುಲ್ಕ ವಂಚನೆಯಾಗಿದೆ!

ಅದ್ಹೇಗೆ ಸಾಧ್ಯ...? ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಾರ್ಗಸೂಚಿ ದರಕ್ಕೇ ನಿವೇಶನ ಮಾರಾಟ ಕ್ರಯ ನೋಂದಣಿಯಾಗಿದೆ. ಹೀಗಿರುವಾಗ ವಂಚನೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಬಹುದು. ಮಾರ್ಗಸೂಚಿ ದರಕ್ಕೆ ನೋಂದಣಿ ಆಗಿದೆ ನಿಜ. ಆದರೆ, ಮಾರುಕಟ್ಟೆ ದರದಲ್ಲಿ ಭೂಮಾಲೀಕರು ಹಾಗೂ ಅಭಿವೃದ್ಧಿದಾರರು ಹಣ ಪಡೆದಿದ್ದಾರೆ. ಈ ಮಾಹಿತಿಯನ್ನು ಮರೆಮಾಚಲಾಗಿದೆ.
ರಾಜ್ಯದಲ್ಲಿರುವ ಗೃಹ ನಿರ್ಮಾಣ ಸಹಕಾರ ಸಂಘಗಳು ತಮ್ಮ ಸದಸ್ಯರಿಗೆ ಹಂಚಿಕೆ ಮಾಡಿರುವ ಎಲ್ಲ ನಿವೇಶನಗಳ ನೋಂದಣಿ ಮಾಹಿತಿ ತನಿಖೆ ಆಗಲಿದೆ. ಸಂಘಗಳ ಪದಾಧಿಕಾರಿಗಳು, ನಿವೇಶನದಾರರು, ಭೂಮಾಲೀಕರು, ಬಡಾವಣೆ ಅಭಿವೃದ್ಧಿದಾರರಿಗೆ ಶೀಘ್ರವೇ ನೋಟೀಸ್ ಜಾರಿಯಾಗಲಿದೆ. ಉಪನೋಂದಣಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಮಾಹಿತಿಗಳ ತನಿಖೆ ನಡೆಯಲಿದೆ.

ಭೂಮಾಲೀಕರು, ಅಭಿವೃದ್ಧಿದಾರರು, ಸಹಕಾರ ಸಂಘಗಳ ಪದಾಧಿಕಾರಿಗಳು, ನಿವೇಶನದಾರರು ಮಾತ್ರ ಒಳಪಡುವುದಿಲ್ಲ. ಇವರಿಗೆ ಸಹಾಯ ಮಾಡಿ ಸರಿಯಾಗಿ ದಾಖಲೆಗಳನ್ನು ಪರಿಶೀಲಿಸದೆ ನೋಂದಣಿ ಮಾಡಿಕೊಟ್ಟು ರಾಜಸ್ವ ಸೋರಿಕೆಗೆ ಕಾರಣವಾದ ಉಪ ನೋಂದಣಾಧಿಕಾರಿಗಳ ಮೇಲೂ ಕ್ರಮ ಆಗಲಿದೆ. ಅವರಿಂದಲೂ ರಾಜಸ್ವ ನಷ್ಟ ವಸೂಲಿ ಮಾಡಿ, ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ.

READ A DETAILED ARTICLE IN KANNADA PRABHA NEWSPAPER IN THE FOLLOWING LINK:



No comments:

BBMP-Planning to regularise(convert) B Katha to A Katha

The BBMP has sent a proposal to the State Government of Karnataka to regularise (convert) B katha properties (vacant properties-without an...