Wednesday, January 1, 2014

BUILDING PLAN VIOLATION AND DEVIATION,IRREGULARITIES AND ILLEGALITIES ROCKS THE BBMP SHOW ! BIG NAMES AND BIG OFFENDERS AND VIOLATORS !!

http://www.kannadaprabha.com/districts/bangalore/%E0%B2%85%E0%B2%95%E0%B3%8D%E0%B2%B0%E0%B2%AE-%E0%B2%95%E0%B2%9F%E0%B3%8D%E0%B2%9F%E0%B2%A1;-%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%82%E0%B2%AA%E0%B2%BF-%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0%E0%B3%81-%E0%B2%95%E0%B2%BF%E0%B2%A1%E0%B2%BF%E0%B2%95%E0%B2%BF%E0%B2%A1%E0%B2%BF/157110.html

LARGE SCALE IRREGULARITIES, VIOLATION, DEVIATION, ENCROACHMENT AND ILLEGALITIES BY LAND SHARKS, MAFIA AND BUILDERS ROCKS THE BBMP COUNCIL MEET.

READ THE LINK.
READ THE ARTICLE
A NEWS REPORT



Kannadaprabha Thursday, January 02, 2014 9:50 AM IST

ಅಕ್ರಮ ಕಟ್ಟಡ; ಬಿಬಿಎಂಪಿ ಸದಸ್ಯರು ಕಿಡಿಕಿಡಿ

 

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಅಕ್ರಮ ಕಟ್ಟಡಗಳು, ಅದಕ್ಕೆ ಕಾರಣರಾಗಿರುವ ನಗರ ಯೋಜನೆ ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಸದಸ್ಯರು ದೂರುಗಳ ಮಳೆ ಸುರಿಸಿದ್ದಾರೆ.ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿ, ಹೆಚ್ಚುತ್ತಿರುವ ಅಕ್ರಮ ಕಟ್ಟಡಗಳು ಮತ್ತು ಅದಕ್ಕೆ ಕಾರಣರಾದ ನಗರ ಯೋಜನೆ ಅಧಿಕಾರಿಗಳ ಬಗ್ಗೆ ಸದಸ್ಯರು ದಾಖಲೆ ಸಹಿತ ದೂರುಗಳನ್ನು ಸಲ್ಲಿಸಿದರು. ಆಶ್ಚರ್ಯ ಎಂದರೆ ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರೇ ಅಧಿಕಾರಿಗಳಿಗೆ ನಗರ ಯೋಜನೆ ಬಗ್ಗೆ ದೂರುಗಳ ಸರಮಾಲೆ ಹಾಕಿದರು. ನಂತರ ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ಅನೇಕ ಸದಸ್ಯರು ನಗರ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪವನ್ನು ಎತ್ತಿ ತೋರಿಸಿದರು.ನಗರ ಯೋಜನೆ ವಿಭಾಗದಲ್ಲಿ ಪ್ರಭಾವಿಗಳೇ ಹೆಚ್ಚಾಗಿರುವುದರಿಂದ ಅವರನ್ನು ವರ್ಗಾವಣೆ ಮಾಡಿ ಎಂದೂ ಆಗ್ರಹಿಸಿದರು. ಆದರೆ, ಸದಸ್ಯರ ದೂರುಗಳನ್ನು ಆಲಿಸಿ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತು ಆಯುಕ್ತ ಎಂ. ಲಕ್ಷ್ಮೀನಾರಾಯಣ ಆ ಬಗ್ಗೆ ಸಂಬಂಧಿಸಿದ ಅಧಿಕಾರಿ ವಿಚಾರಣೆ ಮಾಡಿ ಮುಂದಿನ ಸಭೆಯಲ್ಲಿ ವಿವರ ಒದಗಿಸಲಾಗುವುದು ಎಂದಷ್ಟೇ ಹೇಳಿದರು.ಕಣ್ಣುಮುಚ್ಚಿದ ಅಧಿಕಾರಿಗಳು: ನಗರದ ಯೋಜನೆ ಸ್ಥಾಯಿ ಸಮಿತಿ ಸದಸ್ಯ ಕೆ. ದೊಡ್ಡಣ್ಣ, ಪದ್ಮನಾಭನಗರ ರಿಂಗ್ ರಸ್ತೆ ಬಳಿ ಆದರ್ಶ ಡೆವಲಪರ್ಸ್ ರಾಜಕಾಲುವೆಗೆ ಚಾವಣಿ ಅಳವಡಿಸಿ ಕಟ್ಟಡ ನಿರ್ಮಿಸಿದೆ. ನಗರ ಯೋಜನೆ ಅಧಿಕಾರಿಗಳು ಯಾರಿಗೂ ತಿಳಿಯದಂತೆ ಇದಕ್ಕೆ ಅವಕಾಶ ನೀಡಿದ್ದು, ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ರೀತಿ ಸಾಲಾರ್‌ಪುರಿಯ ಡೆವಲಪರ್ಸ್ ಸಂಸ್ಥೆ ಕಟ್ಟಡ ಪರವಾನಗಿ ಶುಲ್ಕ ಪಾವತಿಸದೆ ಹೊಸೂರು ರಸ್ತೆಯ 24 ಎಕರೆಯಲ್ಲಿ ಪ್ಲಾಟ್‌ಗಳನ್ನು ನಿರ್ಮಿಸುತ್ತಿದೆ ಎಂದು ವಿವರಿಸಿದರು.ಜೆಡಿಎಸ್‌ನ ತಿಮ್ಮನಂಜಯ್ಯ, ಫೋರಂ ಮಾಲ್ ಪಕ್ಕದಲ್ಲಿ ಕೋಡಿ ಕಾಲುವೆಗೇ ಮೌಲ್ಡ್ ಹಾಕಿ ಪ್ರೆಸ್ಟೀಜ್ ಸಂಸ್ಥೆ ಕಟ್ಟಡ ನಿರ್ಮಿಸಿದೆ. ಆದರೆ ನಗರ ಯೋಜನೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದರು. ಸದಸ್ಯರಿಗೆ ಗೊತ್ತಿಲ್ಲಸ್ಥಾಯಿ ಸಮಿತಿಗಳ ನಡಾವಳಿ ಮತ್ತು ನಿರ್ಣಯಗಳನ್ನು ಸದಸ್ಯರಿಗೆ ನೀಡದೆ ಮರೆಮಾಚಿದ ಕೌನ್ಸಿಲ್ ಕಾರ್ಯದರ್ಶಿ ಗೋವಿಂದರಾಜು ವಿರುದ್ಧ ಸದಸ್ಯರು ಪಕ್ಷಭೇದ ಮರೆತು ವಾಗ್ದಾಳಿ ನಡೆಸಿದರು. ಕೆಎಂಸಿ ಪ್ರಕಾರ ಸ್ಥಾಯಿ ಸಮಿತಿಗಳ ನಡವಳಿ ಮತ್ತು ನಿರ್ಣಯಗಳನ್ನು ಎಲ್ಲಾ ಸದಸ್ಯರಿಗೂ ಮನೆಗೆ ಕಳುಹಿಸಬೇಕು. ಆದರೆ ಕೌನ್ಸಿಲ್ ಕಾರ್ಯದರ್ಶಿ ಯಾವ ಸದಸ್ಯರಿಗೂ ಪ್ರತಿ ನೀಡುತ್ತಿಲ್ಲ. ಈ ಬಗ್ಗೆ ಹೈಕೋರ್ಟ್ ಸೂಚನೆ ಇದ್ದರೂ ಮಾಹಿತಿ ನೀಡುತ್ತಿಲ್ಲ ಎಂದು ಅನೇಕ ಸದಸ್ಯರು ರೇಗಿದರು. ಸಮಿತಿಗಳ ನಿರ್ಣಯ ಸದಸ್ಯರಿಗೇ ಗೊತ್ತಿಲ್ಲ ಎಂದರೆ ಏನು ಮಾಡುವುದು ಎಂದು ಬಿಜೆಪಿಯ ಹಿರಿಯ ಸದಸ್ಯ ಗಂಗಭೈರಯ್ಯ ತರಾಟೆ ತೆಗೆದುಕೊಂಡರು. ಆನಂತರ ಮೇಯರ್ ಕಟ್ಟೆ ಸತ್ಯನಾರಾಯಣ, ಸದಸ್ಯರಾದ ಚಂದ್ರಶೇಖರ್, ಅಶ್ವತ್‌ನಾರಾಯಣಗೌಡ, ಶಾಂತಕುಮಾರಿ ಸೇರಿದಂತೆ ಎಲ್ಲಾ ಸದಸ್ಯರು ಗೋವಿಂದರಾಜು ವಿರುದ್ಧ ವಾಗ್ದಾಳಿ ನಡೆಸಿದರು

 http://www.kannadaprabha.com/districts/bangalore/%E0%B2%85%E0%B2%95%E0%B3%8D%E0%B2%B0%E0%B2%AE-%E0%B2%95%E0%B2%9F%E0%B3%8D%E0%B2%9F%E0%B2%A1;-%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%82%E0%B2%AA%E0%B2%BF-%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0%E0%B3%81-%E0%B2%95%E0%B2%BF%E0%B2%A1%E0%B2%BF%E0%B2%95%E0%B2%BF%E0%B2%A1%E0%B2%BF/157110.html

No comments:

BBMP-Planning to regularise(convert) B Katha to A Katha

The BBMP has sent a proposal to the State Government of Karnataka to regularise (convert) B katha properties (vacant properties-without an...